← ಶ್ರೀಕೃಷ್ಣ

ಹರಿಚಿತ್ತಾ ಸತ್ಯ ಹರಿಚಿತ್ತಾ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಹರಿಚಿತ್ತಾ ಸತ್ಯ ಹರಿಚಿತ್ತಾ
ನರಚಿತ್ತವಿದ್ದಂತೆ | ನಡೆಯದು ಲವಲೇಶ

ಸುದತಿ ಮಕ್ಕಳು ಭಾಗ್ಯ ಬೈಸೋದು ನರಚಿತ್ತ |
ಮದಿವಾಗದಿರುವೋದು ಹರಿಚಿತ್ತವು ||
ಕುದುರೆ ಅಂದಣ ಆನೆ ಬೈಸೋದು ನರಚಿತ್ತ |
ಪದಚಾರಿ ಗೈಸೋದು ಹರಿಚಿತ್ತವಯ್ಯಾ ||1||

ವಿಧ ವಿಧ ಯಾತ್ರೆಯ ಬೈಸೋದು ನರಚಿತ್ತ |
ವದಗಿ ಬರುವ ರೋಗ ಹರಿಚಿತ್ತವೊ ||
ಸದ ಅನ್ನದಾನವ ಬೈಸೋದು ನರಚಿತ್ತ |
ಉದತಕ್ಕೆ ಅಲಸೋದು ಹರಿಚಿತ್ತವಯ್ಯ ||2||

ಭೂಮಿಯನಾಳಬೇಕೆಂಬೋದು ನರಚಿತ್ತ |
ಆ ಮಾತಿಗೆ ಅಡ್ಡ ಹರಿಚಿತ್ತವು ||
ವಿಜಯ ವಿಠಲನ್ನ ಬೈಸೋದು ನರಚಿತ್ತ |
ಕಾಮಿಸಿ ಜೀವ್ಯೊದು ಹರಿಚಿತ್ತವಯ್ಯಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.