← ಪರಬ್ರಹ್ಮ

ಬಲು ಮಧುರವೊ

📂 ಪರಬ್ರಹ್ಮ
✍️ ವಚನವೇದ
🏷️ ಕೀರ್ತನೆಗಳು
🎵 ರಾಗ: ಕೇದಾರಾ
🥁 ತಾಳ: ಏಕತಾಲ
ಬಲು ಮಧುರವೊ ನಿನ್ನ ಹೆಸರು
ಕಿವಿಗೆ ಸುಧೆಯ ಕರೆವುದು |
ದೀನಶರಣ ಪ್ರಾಣರಮಣ
ಅಮೃತ ಭವನ ಧನವಿದು ||
ನಿನ್ನ ಹೆಸರ ಕೀರ್ತಿಸಿದರೆ
ನಾವು ಅಮರರೆಪ್ಪೆವೋ |
ಚಿಂತೆಗಡಲು ನಿಮಿಷದಲ್ಲಿ
ಬತ್ತುತ ಬಯಲಪ್ಪುದೋ ||
ಹೃದಯದಲ್ಲಿ ನಿನ್ನ ಮಧುರ
ಗಾಯನವನೆ ಗೈವೆವು |
ಹೃದಯನಾಥ ಚಿದಾನಂದ
ನಿರುತ ನಿನ್ನ ನೆನೆವೆವು ||
← ಪರಬ್ರಹ್ಮ ವಚನವೇದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.