← ಶ್ರೀಕೃಷ್ಣ

ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ
ಹಾವಿಗೆ ತಡೆಯಾಗಿಪ್ಪದು ನಿತ್ಯ ಹಾಡಿ

ಮನುಜನ್ನ ಭೋಕ್ತರಿಕಾಯೈದಿ
ಧನದಾತ ಸವಸನ ಭೂಷಣ ವಿದ್ಯಾ ಕನಕ
ವಿನಯದಿಂದಲಿ ಇಲ್ಲಿ ತನಕ ಬಂದು
ಘನವಾಗಿ ಬೇಡುವರು ಮುಕ್ತಿ ಅಹಿಕಾ ||1||

ದೇವ ಪಾದ ಪರಿಯಿಂತು ತಿಳಿದು ಕರ್ಮ ಭೂ
ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು
ಆವಾವತರು ಜಾತಿಗಳಳಿದು ನಮ್ಮ
ಪಾವಮಾನಿ ಮತ ಪೊಕ್ಕು ಸುಳಿದು ||2||

ಒಂದೊಂದು ಪರಿಯಲ್ಲಿ ಸಾಗಿ ಸಾರಿ
ನಿಂದಿರದೆ ಇಪ್ಪದು ಕಾವ ಲೇಸಾಗಿ
ಅಂದದಿಂದಲಿ ಮೌಳಿ ತೂಗಿ ವೇಗ
ಕುಂದನಿಷ್ಟವಾಯಿತು ತಾನೆ ಪೋಗಿ||3||

ಏಕಾಂಶದಲಿ ಇಲ್ಲಿ ಒಂದೆ ನಮಗೆ
ಬೇಕಾದರ್ಥವ ಕೊಡುವದು
ವಾಕುವರ ಸಿದ್ಧಿ ಲೋಕ ತುಂಬಿದೆ ಇದೆ ಸುಧಿಕೀರ್ತಿ
ತಾ ಕೊಂಡಾಡಿದರಾಗೆ ಬಲು ಚಿತ್ತ ಶುದ್ಧಿ ||4||

ಸತ್ಯಾಗಿ ಸತ್ಯಬೋಧಯತಿ ಕೈಯ ಗುರು
ಸತ್ಯಪ್ರೀಯ
ಸ್ತೌತ್ಯರಾಮನ್ನ ಹಾವಿಗೆಯ ನಂಬೆ
ಭೃತ್ಯವತ್ಸಲ ವಿಜಯವಿಠ್ಠಲ ಸಹಾಯ||5||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.