← ಶ್ರೀಶಾರದಾದೇವಿ

ಬಂದಿಹೆ ಜನನಿ ಮರಳಿ ನೀನು

📂 ಶ್ರೀಶಾರದಾದೇವಿ
🏷️ ಕೀರ್ತನೆಗಳು
🎵 ರಾಗ: ರಾಗಮಾಲಿಕೆ
🥁 ತಾಳ: ಆದಿತಾಳ
ಶ್ರೀರಂಜಿನಿ -
ಬಂದಿಹೆ ಜನನಿ ಮರಳಿ ನೀನು
ಧರೆಯ ಪಾಪದ ಭಾರವ ಕಳೆಯೆ |
ದಗ್ಧ ಹೃದಯದ ಜ್ವಾಲೆಯನಾರಿಸೆ
ದುಃಖಿತರೆಲ್ಲರ ಕಣ್ಣೀರೊರಸೆ ||
ಮೋಹನ -
ಯುಗಯುಗದಲೂ ನೀ ಬರುವೆ ಧರೆಗೆ
ಯಾತನೆಗಳನು ಎನಿತೋ ಸಹಿಪೆ |
ಕಲ್ಲಾಗಿಹುದು ಹೃದಯವೆಮ್ಮದು
ಮರಳಿ ಮರಳಿ ಮರೆವೆವು ಧರ್ಮವ ||
ಸಹಾನ -
ಸಹನ-ಮೂರುತಿ ಸೀತೆಯ ರೂಪದಿ
ಬೋಧಿಸಿ ಅರುಹಿದ ಅಚಲ ಭಕ್ತಿಯ |
ರಾಧೆಯ ರೂಪದಿ ದರುಶನವಿತ್ತು
ಪ್ರೇಮದ ಮಹಿಮೆಯ ಪ್ರಚಾರಗೈದೆ ||
ಪುನ್ನಾಗವರಾಲಿ -
ರಾಮಕೃಷ್ಣಲೀಲೆ ಪೂರಣಗೈಯಲು
ಎಲ್ಲರ ತಾಯಿಯು ಆಗಿ ನೀ ಬಂದಿಹೆ |
ಪಾಪಿ ತಾಪಿಗಳ ಅಪಾರ ಶರಣು
ಸರ್ವರ ಆಶ್ರಯ, ಅರ್ಹರೇ ಎಲ್ಲ! ||
ಮಧ್ಯಮಾವತಿ -
ಭಯಾರ್ತ-ಭ್ರಾಂತ-ಅನಾಥರೆಮಗೆ
ಜನನಿ ಬಂದು ನೀ ಅಭಯವನಿತ್ತೆ |
ಮಾಯಾಮರೀಚಿಯ ದೂರವ ಮಾಡಿ
ಬೀರಿದೆ ಎಲ್ಲರ ಹೃದಯದಿ ಬೆಳಕ ||
← ಶ್ರೀಶಾರದಾದೇವಿ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.