← ಶ್ರೀಕೃಷ್ಣ

ಹೋದ್ಯಾ ಶೇಷಗಿರಿದಾಸ ಸುಲಭ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಹೋದ್ಯಾ ಶೇಷಗಿರಿದಾಸ ಸುಲಭ
ಹಾದಿಯನು ಮೆಟ್ಟಿ ನಮ್ಮನು ಭವಾಬ್ದಿಯೊಳಿಟ್ಟು

ಸಲಹಿದೆನು ಸಾಕಿದೆನು ಕಾಲಕಾಲಕೆ ನೋಡಿ
ತಿಳಿಸಿದೆನು ತತ್ವಗಳು ನಿರುತ ಬಿಡದೆ
ಬಳಿವಿಡಿದು ತಿರುಗಿ ಉಣಿಸಿದೆನು ಉಡಿಸಿದೆನು ವೆ-
ಗ್ಗಳವಾಗಿ ನೋಡಿ ಸುಖಿಸಿದೆನೊ ಮಾತಾಡಿ ||1||

ನಿನ್ನ ಮ್ಯಾಲಿನ ಕರುಣ ಕಮಲಾಕ್ಷ ವೇಗದಲ
ಎನ್ನಮ್ಯಾಲೆ ಇನ್ನು ಮಾಡಲಿಲ್ಲ
ಮುನ್ನೆ ಸಾಧನ ಪೂರ್ತಿ ನಿನಗಾಯಿತೇನೋ ಸಂ
ಪನ್ನಮತಿ ಉಳ್ಳವನೆ ಸಜ್ಜನ ಶಿರೋಮಣಿ ||2||

ಧಿಕು ಎನ್ನ ಜನುಮ ನಿನ್ನಂಥ ಪ್ರಿಯನ ಬಿಟ್ಟು |
ಅಕಟಕಟ ಭೂಮಿಯೊಳು ಬದುಕುವದೂ |
ಸಕಲಲೋಕೇಶ ಸಿರಿ ವಿಜಯವಿಠ್ಠಲ ನಿನ್ನ
ಭಕುತಿಗೆ ಮೆಚ್ಚಿ ತಡಮಾಡದಲೆ ಕರದೊಯ್ದು ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.