← ಶ್ರೀದೇವಿ

ಆತುರದಿ ಹಾತೊರೆದು

📂 ಶ್ರೀದೇವಿ
✍️ ದ.ರಾ. ಬೇಂದ್ರೆ
🏷️ ಕೀರ್ತನೆಗಳು
🎵 ರಾಗ: ದೇಸ್
🥁 ತಾಳ: ಝಪತಾಲ
🎧
ಶ್ರವಣ ಮಾಡಿ
ಸ್ವಾಮಿ ಭಗವದಾನಂದ
ಆತುರದಿ ಹಾತೊರೆದು ಬಂದೆ ಅವ್ವಾ ಎಂದು |
ಯಾತರದು ಕಾತರವು ನಿನ್ನ ಬಳಿಗಿಂದು ||

ಹೆರತನದ ಹೆದರಿಕೆಯು ಹೃದಯದೊಳು ಹೊಕ್ಕಿಹುದು
ನರತನದ ಹುದುರೊಳಗೆ ಜೀವ ಸಿಕ್ಕಿಹುದು |
ಹೊರೆತನದ ಬಲೆಯೊಳಗೆ ಬುದ್ದಿ ಬಳಲಾಡುವುದು
ಪರೆ ನಿನ್ನ ಕಿಂಕರಗೆ ಅಭಯಕರ ನೀಡೌ ||

ಎತ್ತೆತ್ತ ನೋಡಿದರು ಮತ್ತೆ ಬೇರೆ ಇಲ್ಲ
ಅತ್ತ ನೀನೇ ಮತ್ತು ಇತ್ತ ನೀನು |
ಸುತ್ತಿರುವ ಬೆದರಿಕೆಯ ಬಟ್ಟೆಯನು ಕಳದೊಗೆದು
ಬತ್ತಲಾದೆನು ಅವ್ವ ಬಾಲನಂತೆ ನಾನು ||

ಮುಚ್ಚಿಡುವುದೇಕಿನ್ನು ಬಚ್ಚಿಡುವುದಿನ್ನೆಲ್ಲಿ
ಮುಚ್ಚುಮರೆ ಮಾಳ್ಪುದಕೆ ಮುಸುಕು ಇಹುದೆಲ್ಲಿ |
ನೆಚ್ಚು ಮೆಚ್ಚುಗಳನ್ನು ಬಿಚ್ಚು ಜೀವದೊಳೆತ್ತಿ
ಹೊಚ್ಚಿ ಪ್ರೀತಿಯ ಸೆರಗ ಎತ್ತಿಕೋ ಎನ್ನ ||
← ಶ್ರೀದೇವಿ ದ.ರಾ. ಬೇಂದ್ರೆ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.