← ಭಗವಾನ್ ಬುದ್ಧ

ಬುದ್ಧ ಚಂದ್ರೋದಯದಿ

📂 ಭಗವಾನ್ ಬುದ್ಧ
✍️ ಪ್ರಭುಶಂಕರ
🏷️ ಕೀರ್ತನೆಗಳು
🎵 ರಾಗ: ಭೈರವ್
🥁 ತಾಳ: ಝಪತಾಲ
ಬುದ್ಧಚಂದ್ರೋದಯದಿ
ಹಿಗ್ಗಿ ನಮ್ಮೆದೆ ಕಡಲು
ಶಾಂತಿ ಶೀಕರವನಿದೋ ಚೆಲ್ಲುತಿಹುದು
ಜಗವ ಗೆಲ್ಲುತಿಹುದು ||
ನೂರು ಸಾಸಿರ ದಳದ
ಬುದ್ಧಪದ್ಮವು ಅರಳೆ
ಭಕುತಭೃಂಗವು ಬಂದು ಮುತ್ತುತಿಹುದು
ಸುತ್ತ ಸುತ್ತುತಿಹುದು ||
ಜ್ವಾಲೆ ಮೇಲುದ ಹೊದೆದು
ಅಗ್ನಿದೇವನೆ ನಡೆದು
ಕರ್ಮಕಾನನವನ್ನು ದಹಿಸಲೆಂದು
ನಡೆದು ಬರುವನಿಂದು ||
← ಭಗವಾನ್ ಬುದ್ಧ ಪ್ರಭುಶಂಕರ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.