← ವಚನಗಳು

ಊರ ಮುಂದೆ ಹಾಲತೊರೆ ಇರಲು

📂 ವಚನಗಳು
✍️ ಅಕ್ಕಮಹಾದೇವಿ
🏷️ ವಚನಗಳು
ಊರ ಮುಂದೆ ಹಾಲತೊರೆ ಇರಲು
ನೀರಡಸಿ ಬಂದೆನಲ್ಲಯ್ಯ ನಾನು.
ಬರುದೊರೆವೋದವಳನೆನ್ನನಪ್ಪದಿರಯ್ಯಾ.
ನೀನೊತ್ತಿದ ಕಾರಣ ಬಂದೆನಯ್ಯ.
ಹೆರಿಗೆ ಕೂತವಳ ತೆಗೆದಪ್ಪುವನೆಗ್ಗ ನೋಡಾ ?
ಈ ಸೂನೆಗಾರಂಗೆ ಕುರಿಯ ಮಾರುವರೆ ?
ಮಾರಿದರೆಮ್ಮವರೆನ್ನ ನಿನಗೆ.
ಎನ್ನತ್ತ ಮುಂದಾಗದಿರು, ಎನ್ನಮೇಲೆ ಕಾಲನಿಡದಿರು.
ಚೆನ್ನಮಲ್ಲಿಕಾರ್ಜುನಂಗೆ ಸಲೆ ಮಾರುವೋದವಳಾನು.
← ವಚನಗಳು ಅಕ್ಕಮಹಾದೇವಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.