← ಭಗವಾನ್ ಬುದ್ಧ

ಬೋಧಿವೃಕ್ಷದಡಿ ಧ್ಯಾನದಿ

📂 ಭಗವಾನ್ ಬುದ್ಧ
✍️ ಸ್ವಾಮಿ ಹರ್ಷಾನಂದ
🏷️ ಕೀರ್ತನೆಗಳು
🎵 ರಾಗ: ಯಮನ್
ಬೋಧಿವೃಕ್ಷದಡಿ ಧ್ಯಾನದಿ ಮುಳುಗಿಹ
ಯೋಗಿವರ್ಯನೆ ನೀನಾರು |
ತಪದ ತಾಪದಿಂ ದೇಹವು ಸೊರಗಿದೆ
ಜ್ಯೋತಿಯು ಹಣೆಯಲಿ ಬೆಳಗುತಿದೆ ||
ಹೊರಗಡೆ ಕಾಂಬುದು ಜೋಗಿಯ ವೇಷ
ಮುಖದಲಿ ರಾಜಕುಮಾರನ ತೇಜ |
ಯಾರ ಭವನವನು ಅಂಧಕಾರದಲಿ
ಮುಳುಗಿಸಿ ಬಂದಿಹೆ ಪೇಳೆಲೆ ಜವದಿ ||
ಜ್ಞಾನಲಾಭವೋ ದೇಹಪಾತವೋ
ಆಗಲಿ ಒಂದು ಎರಡರಲಿಂದು |
ಪಣವ ತೊಟ್ಟು ನೀ ಬಸವಳಿದಿರಲು
ಕಲ್ಲೂ ಕರಗುತ ನೀರಾಗುವುದು ||
ತಾಪತ್ರಯದಲಿ ಬೆಂದಿಹ ಜನರನು
ಉದ್ಧರಿಸಲು ನೀ ಬಂದಿಹೆಯೇನು |
ವಿಶ್ವಪ್ರೇಮವ ಪ್ರಚಾರಗೈಯಲು
ನಿಜಸುಖವನು ನೀ ತ್ಯಜಿಸಿಹೆಯೇನು ||
← ಭಗವಾನ್ ಬುದ್ಧ ಸ್ವಾಮಿ ಹರ್ಷಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.