← ವಚನಗಳು

ತಾನು ದಂಡುಮಂಡಲಕ್ಕೆ ಹೋದಹೆನೆಂದಡೆ

📂 ವಚನಗಳು
✍️ ಅಕ್ಕಮಹಾದೇವಿ
🏷️ ವಚನಗಳು
ತಾನು ದಂಡುಮಂಡಲಕ್ಕೆ ಹೋದಹೆನೆಂದಡೆ
ನಾನು ಸುಮ್ಮನಿಹೆನಲ್ಲದೆ,
ತಾನೆನ್ನ ಕೈಯೊಳಗಿದ್ದು ತಾನೆನ್ನ ಮನದೊಳಗಿದ್ದು
ಎನ್ನ ಕೂಡದಿದ್ದಡೆ ನಾನೆಂತು ಸೈರಿಸುವೆನವ್ವಾ ?
ನೆನಹೆಂಬ ಕುಂಟಿಣಿ ಚೆನ್ನಮಲ್ಲಿಕಾರ್ಜುನನ ನೆರಹದಿದ್ದಡೆ ನಾನೇವೆ ಸಖಿಯೆ ?
← ವಚನಗಳು ಅಕ್ಕಮಹಾದೇವಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.