← ಶ್ರೀರಾಮಕೃಷ್ಣ

ಮಣಿವೆ ನಿನ್ನ ಕಮಲದಡಿಗೆ

📂 ಶ್ರೀರಾಮಕೃಷ್ಣ
✍️ ಸ್ವಾಮಿ ತದ್ರೂಪಾನಂದ
🏷️ ಕೀರ್ತನೆಗಳು
🎵 ರಾಗ: ಭೀಮಪಲಾಸೀ
🥁 ತಾಳ: ಏಕತಾಲ
ಮಣಿವೆ ನಿನ್ನ ಕಮಲದಡಿಗೆ
ದಯದಿ ಬಾರೊ ಎದೆಯ ಗುಡಿಗೆ ||
ಭಕ್ತಹೃದಯಜಲಜ ಬಂಧು
ನೀನಪಾರ ಕರುಣೆ ಸಿಂಧು |
ಪ್ರೇಮಭಕ್ತಿಯೊಡನೆ ಕೂಡಿ
ಬಾರೈ ತಂದೆ ಕರೆವೆ ಬೇಡಿ ||
ತ್ಯಾಗಮೂರ್ತಿ ತಪೋಮೂರ್ತಿ
ಜ್ಞಾನಮೂರ್ತಿ ಸೊಗದ ಮೂರ್ತಿ |
ಹರಿದಿದೆಲ್ಲೆಡೆ ನಿನ್ನ ಕೀರ್ತಿ
ತ್ಯಾಗಪಥದ ನಿತ್ಯಸ್ಫೂರ್ತಿ ||
ವಿಶ್ವದೊಡೆಯ ಶುದ್ಧಹೃದಯ
ಕೋಟಿಸೂರ್ಯ ಜ್ಯೋತಿರೂಪ |
ನಿನ್ನೀ ಕಂದನ ಕರೆಯನಾಲಿಸಿ
ಬಾರೋ ಬೇಗ ಶಕ್ತಿವೆರಸಿ ||
← ಶ್ರೀರಾಮಕೃಷ್ಣ ಸ್ವಾಮಿ ತದ್ರೂಪಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.