← ವಚನಗಳು

ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ ?

📂 ವಚನಗಳು
✍️ ಅಕ್ಕಮಹಾದೇವಿ
🏷️ ವಚನಗಳು
ಪ್ರಾಣ ಹೊಲ ಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ ?
ದೇವ ದಾನವ ಮಾನವರೆಲ್ಲಾ ಜೋಳವಾಳಿಯಲೈದಾರೆ.
ಜಾಣಕಲುಕುಟಿಗನನಗಲದೆ ಹೂವನೆ ಕೊಯ್ದು,
ಕಲಿಯುಗದ ಕರಸ್ಥಲದೇವಪೂಜೆ ಘನ.
ಮೇರುವಿನ ಕುದುರೆ ನಲಿದಾಡಲದುಭುತ.
ಜಾರಜಂಗುಳಿಗಳ ಜಗಳ ಮೇಳಾಪ,
ಮರುಪತ್ತದ ಮಾತು, ನಗೆ ಹಗರಣ ?
ಕ್ಷೀರಸಾಗರದಲ್ಲಿ ದಾರಿಯಳವಡದಯ್ಯಾ.
ನೀ ಹೇಳಬೇಕು, ಭಕ್ತರೆಂತಿಪ್ಪರೊ ?
ಪಂಚವರ್ಣದ ಬಣ್ಣ ಸಂತೆಯ ಪರದಾಟವು
ಚೆನ್ನಮಲ್ಲಿಕಾರ್ಜುನಯ್ಯಾ, ತ್ರಿಭುವನದ ಹೆಂಡಿರ ನೀರಹೊಳೆಯಲ್ಲಿರಿಸಿತ್ತು.
← ವಚನಗಳು ಅಕ್ಕಮಹಾದೇವಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.