← ವಚನಗಳು

ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ?

📂 ವಚನಗಳು
✍️ ಅಕ್ಕಮಹಾದೇವಿ
🏷️ ವಚನಗಳು
ಭವದ ಬಟ್ಟೆಯ ದೂರವನೇನ ಹೇಳುವೆನಯ್ಯಾ ?
ಎಂಬತ್ತುನಾಲ್ಕು ಲಕ್ಷ ಊರಲ್ಲಿ ಎಡೆಗೆಯ್ಯಬೇಕು.

ಒಂದೂರಭಾಷೆಯೊಂದೂರಲಿಲ್ಲ.
ಒಂದೂರಲ್ಲಿ ಕೊಂಡಂಥ ಆಹಾರ ಮತ್ತೊಂದೂರಲಿಲ್ಲ.

ಇಂತೀ ಊರ ಹೊಕ್ಕ ತಪ್ಪಿಂಗೆ
ಕಾಯವ ಭೂಮಿಗೆ ಸುಂಕವ ತೆತ್ತು
ಜೀವವನುಳುಹಿಕೊಂಡು ಬರಬೇಕಾಯಿತ್ತು.

ಇಂತೀ ಮಹಾಘನದ ಬೆಳಕಿನೊಳಗೆ
ಕಳೆದುಳಿದು ಸುಳಿದಾಡಿ
ನಿಮ್ಮ ಪಾದವ ಕಂಡು ಸುಯಿಧಾನಿಯಾದೆ
ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ
← ವಚನಗಳು ಅಕ್ಕಮಹಾದೇವಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.