← ಶ್ರೀಶಿವ

ಮಾಡಿ ಮಾಡಿ ಕೆಟ್ಟರು

📂 ಶ್ರೀಶಿವ
✍️ ಬಸವಣ್ಣ
🏷️ ವಚನಗಳು
🎵 ರಾಗ: ಗುರ್ಜರಿತೋಡಿ
🥁 ತಾಳ: ತ್ರಿತಾಲ
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ ||
ಮಾಡಿದೆನೆಂಬುದು ಮನದಲಿ ಹೊಳೆದರೆ
ನೀಡಿದೆನೆಂಬುದು ನಿಜದಲಿ ತಿಳಿದರೆ
ಏಡಿಸಿ ಕಾಡಿತ್ತು ಶಿವನ ಡಂಗುರ ||
ಮಾಡಿದೆನೆನ್ನದಿರಾ ಲಿಂಗಕೆ
ನೀಡಿದೆನೆನ್ನದಿರಾ ಜಂಗಮಕೆ
ಮಾಡುವ ನೀಡುವ ನಿಜಗುಣವುಳ್ಳವರ
ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಯ್ಯ ||
← ಶ್ರೀಶಿವ ಬಸವಣ್ಣ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.