← ವಚನಗಳು

ಬೋಳೆಯನೆಂದು ನಂಬಬೇಡ,

📂 ವಚನಗಳು
✍️ ಅಕ್ಕಮಹಾದೇವಿ
🏷️ ವಚನಗಳು
ಬೋಳೆಯನೆಂದು ನಂಬಬೇಡ,
ಢಾಳಕನವನು ಜಗದ ಬಿನ್ನಾಣಿ.
ಬಾಣ ಮಯೂರ ಕಾಳಿದಾಸ ಓಹಿಲ ಉದ್ಭಟ
ಮಲುಹಣರವರಿಗಿತ್ತ ಪರಿ ಬೇರೆ.
ಮುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬ ಚೆನ್ನಮಲ್ಲಿಕಾರ್ಜುನನು.
← ವಚನಗಳು ಅಕ್ಕಮಹಾದೇವಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.