← ವಚನಗಳು

ಮಾಟಕೂಟ ಬಸವಣ್ಣಂಗಾಯಿತ್ತು.

📂 ವಚನಗಳು
✍️ ಅಕ್ಕಮಹಾದೇವಿ
🏷️ ವಚನಗಳು
ಮಾಟಕೂಟ ಬಸವಣ್ಣಂಗಾಯಿತ್ತು.
ನೋಟಕೂಟ ಪ್ರಭುದೇವರಿಗಾಯಿತ್ತು.
ಭಾವಕೂಟ ಅಜಗಣ್ಣಂಗಾಯಿತ್ತು.
ಸ್ನೇಹಕೂಟ ಬಾಚಿರಾಜಂಗಾಯಿತ್ತು.
ಇವರೆಲ್ಲರ ಕೂಟ ಚೆನ್ನಬಸವಣ್ಣಂಗಾಯಿತ್ತು.
ಎನಗಿನ್ನಾವ ಕೂಟವಿಲ್ಲವಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ.
← ವಚನಗಳು ಅಕ್ಕಮಹಾದೇವಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.