← ಶ್ರೀದೇವಿ

ಮಾನವಸಂತಾನದೆಡೆಗೆ ಎನಿತು

📂 ಶ್ರೀದೇವಿ
✍️ ವಚನವೇದ
🏷️ ಕೀರ್ತನೆಗಳು
🎵 ರಾಗ: ಭೈರವೀ
🥁 ತಾಳ: ದಾದರಾ
ಮಾನವ ಸಂತಾನದೆಡೆಗೆ ಎನಿತು ಕರುಣೆ ನಿನ್ನದು
ಅದ ನೆನೆದರೆ ಕಂಬನಿಯೆ ಕೋಡಿಯೊಡೆದು ಹರಿವುದು ||

ಹುಟ್ಟಿದಂದಿನಿಂದ ನಾನು
ನಿನ್ನಾಣೆಯ ಮೀರಿದೆ
ಆದರೂ ನೀ ಅಕ್ಕರೆಯಲಿ
ತಾಯ್ತನವನೆ ತೋರಿದೆ |
ಮಧುರ ವಚನದಿಂದ ಮನವ
ಸಂತೈಸುತ ನಲಿಸಿದೆ
ಇದ ನೆನೆದರೆ ಕಂಬನಿಯೆ
ಕೋಡಿಯೊಡೆದು ಹರಿದಿದೆ ||

ನಿನ್ನೊಲವಿನ ಹೊರೆಯ ಹೊತ್ತು
ನಾನು ಬಹಳ ಬಳಲಿದೆ
ಇನ್ನು ಮುಂದೆ ಹೊರಲಾರದೆ
ಎದೆಯು ನರಳಿ ಕೊರಗಿದೆ |
ನಿನ್ನೊಲವಿನ ಕರಸ್ಪರ್ಶದಿ
ಈ ನೋವನು ನೀಗಿಸು
ನಿನ್ನ ಪಾದಪದ್ಮದಲ್ಲಿ
ನನ್ನನಿರಿಸಿ ಪಾಲಿಸು ||
← ಶ್ರೀದೇವಿ ವಚನವೇದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.