← ವಚನಗಳು

ವಿರಕ್ತಿಯೇ ಅವಿರಕ್ತಿ, ವಿರಕ್ತನೆನ್ನದಿರಣ್ಣಾ.

📂 ವಚನಗಳು
✍️ ಅಕ್ಕಮಹಾದೇವಿ
🏷️ ವಚನಗಳು
ವಿರಕ್ತಿಯೇ ಅವಿರಕ್ತಿ, ವಿರಕ್ತನೆನ್ನದಿರಣ್ಣಾ.
ನೋಟದ ಕರುಳ ಕೊಯ್ಯದನ್ನಕ್ಕರ,
ಕ್ರೀಯದ ಕರಬೋನಗಳೊಡೆಯದನ್ನಕ್ಕರ,
ಅಷ್ಟಮದಾದಿಗಳೆಂಬವ ಹೊಟ್ಟುಹುರಿಯದನ್ನಕ್ಕರ,
ಬೇಕುಬೇಡಾಯೆಂದು ಪರಿವ
ಸರ್ವಸಂದೇಹವ ಹೂಳದನ್ನಕ್ಕರ ವಿರಕ್ತ ವಿರಕ್ತನೆನ್ನದಿರಣ್ಣಾ.
ಶ್ರೀಶೈಲಚೆನ್ನಮಲ್ಲಿಕಾರ್ಜುನದೇವನೊಬ್ಬನೆ ವಿರಕ್ತ ಕಾಣಿರಣ್ಣಾ.
← ವಚನಗಳು ಅಕ್ಕಮಹಾದೇವಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.