← ಶ್ರೀಕೃಷ್ಣ
ಯಾದವ ನೀ ಬಾ
🎧
ಶ್ರವಣ ಮಾಡಿ
ಸ್ವಾಮಿ ಭಗವದಾನಂದ
ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೋ ||
ಸೋದರಮಾವನ ಮಥುರೆಲಿ ಮಡುಹಿದ
ಯಶೋದಾಕಂದ ನೀ ಬಾರೋ ||
ಕಣಕಾಲಂದುಗೆ ಘುಲುಘುಲುರೆನುತಲಿ
ಝಣಝಣ ವೇಣುನಿನಾದದಲಿ |
ಚಿಣ್ಣಿಕೋಲು ಚೆಂಡು ಬುಗುರಿಯನಾಡುತ
ಸಣ್ಣವರೊಡಗೂಡಿ ನೀ ಬಾರೋ ||
ಶಂಖ ಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ |
ಅಕಳಂಕ ಚರಿತನೆ ಆದಿನಾರಾಯಣ
ಬೇಕೆಂಬ ಭಕ್ತರಿಗೊಲಿ ಬಾರೋ ||
ಖಗವಾಹನನೆ ಬಗೆಬಗೆರೂಪನೆ
ನಗೆಮೊಗದರಸನೆ ನೀ ಬಾರೋ |
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಟ್ಠಲ ನೀ ಬಾರೋ ||
ಮಾಧವ ಮಧುಸೂದನ ಬಾರೋ ||
ಸೋದರಮಾವನ ಮಥುರೆಲಿ ಮಡುಹಿದ
ಯಶೋದಾಕಂದ ನೀ ಬಾರೋ ||
ಕಣಕಾಲಂದುಗೆ ಘುಲುಘುಲುರೆನುತಲಿ
ಝಣಝಣ ವೇಣುನಿನಾದದಲಿ |
ಚಿಣ್ಣಿಕೋಲು ಚೆಂಡು ಬುಗುರಿಯನಾಡುತ
ಸಣ್ಣವರೊಡಗೂಡಿ ನೀ ಬಾರೋ ||
ಶಂಖ ಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ |
ಅಕಳಂಕ ಚರಿತನೆ ಆದಿನಾರಾಯಣ
ಬೇಕೆಂಬ ಭಕ್ತರಿಗೊಲಿ ಬಾರೋ ||
ಖಗವಾಹನನೆ ಬಗೆಬಗೆರೂಪನೆ
ನಗೆಮೊಗದರಸನೆ ನೀ ಬಾರೋ |
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಟ್ಠಲ ನೀ ಬಾರೋ ||