← ವಚನಗಳು

ಹರಿಯ ನುಂಗಿತ್ತು ಮಾಯೆ,

📂 ವಚನಗಳು
✍️ ಅಕ್ಕಮಹಾದೇವಿ
🏷️ ವಚನಗಳು
ಹರಿಯ ನುಂಗಿತ್ತು ಮಾಯೆ,
ಅಜನ ನುಂಗಿತ್ತು ಮಾಯೆ
ಇಂದ್ರನ ನುಂಗಿತ್ತು ಮಾಯೆ,
ಚಂದ್ರನ ನುಂಗಿತ್ತು ಮಾಯೆ
ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ,
ಅರಿಯೆನೆಂಬ ಅe್ಞನಿಗಳ ನುಂಗಿತ್ತು ಮಾಯೆ,
ಈರೇಳುಭುವನವನಾರಡಿಗೊಂಡಿತ್ತು ಮಾಯೆ,
ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಮಾಯವ ಮಾಣಿಸಾ ಕರುಣಿ.
← ವಚನಗಳು ಅಕ್ಕಮಹಾದೇವಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.