← ಶ್ರೀರಾಮಕೃಷ್ಣ

ರಾಮಕೃಷ್ಣ ಗುರುವೇ

📂 ಶ್ರೀರಾಮಕೃಷ್ಣ
✍️ ಮೈಸೂರು ದೇವೇಂದ್ರಪ್ಪ
🏷️ ಕೀರ್ತನೆಗಳು
🎵 ರಾಗ: ಮಾಲಕೌಂಸ್
🥁 ತಾಳ: ತ್ರಿತಾಲ
ರಾಮಕೃಷ್ಣ ಗುರುವೇ ಪರಮಹಂಸ ಗುರುವೇ |
ಕಾಮಿತದಾಯಕ ಪ್ರೇಮದಿ ನಮಿಪೆವು ||
ಸಕಲ ಮತವ ನೀನೇಕವೆಂದೆಣಿಸಿದೆ
ಅಕಲಂಕಮಹಿಮ ಮಮ ದೇವ |
ಲೋಕಸೇವೆಯಿಂ ಖ್ಯಾತಿಯ ಹೊಂದಿದೆ
ಮುಕ್ಕಣ್ಣನ ಪ್ರಿಯ ನಮಿಪೆವು ದೇವ ||
ಸ್ವಾಮಿ ವಿವೇಕಾನಂದನ ಗುರುವೇ
ಪ್ರೇಮದಿ ಸಲಹೈ ಸಕಲ ಲೋಕವ |
ತಾಮಸ ಮಾಡದೆ ಕಾವುದು ಎಮ್ಮನು
ಚಾಮುಂಡಾಂಬೆಯ ವರಭಕ್ತನೆ ||
← ಶ್ರೀರಾಮಕೃಷ್ಣ ಮೈಸೂರು ದೇವೇಂದ್ರಪ್ಪ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.