← ಶ್ರೀಶಾರದಾದೇವಿ

ರಾಮಕೃಷ್ಣ ತಪೋಸೂರ್ಯ

📂 ಶ್ರೀಶಾರದಾದೇವಿ
✍️ ಜಿ.ಎಸ್. ಶಿವರುದ್ರಪ್ಪ
🏷️ ಕೀರ್ತನೆಗಳು
🎵 ರಾಗ: ಮಿಶ್ರ ಪೀಲೂ
🥁 ತಾಳ: ಏಕತಾಲ
ರಾಮಕೃಷ್ಣ ತಪೋಸೂರ್ಯ
ಕಿರಣಬಿಂಬ ಚಂದ್ರಿಕೆ
ಓ ತಾಯಿ ಅಂಬಿಕೆ ||
ಗಿರಿಯ ದರಿಯ ನೆಲವ ಜಲವ
ತಬ್ಬಿ ನಿಂತ ಕರುಣೆಯೆ
ವಾತ್ಸಲ್ಯವರಣೆಯೆ ||
ರಾಮಕೃಷ್ಣ ತಪೋವನದ
ಪರ್ಣಕುಟಿಯ ದೀಪವೆ |
ಬಳಿಗೆ ಬಂದ ಹಣತೆಗಳಿಗೆ
ಬೆಳಕನಿತ್ತ ಕಿರಣವೆ
ಮೌನಪ್ರಭಾವಲಯವೆ ||
ಸಂಕಟಗಳ ವನವಸನವ-
ನುಟ್ಟು ನಿಂತ ಶಿಖರವೆ |
ನದನದಿಗಳ ವಾತ್ಸಲ್ಯದ
ಹಾಲೂಡಿದ ತೀರ್ಥವೆ
ದಿವ್ಯ ಕೃಪಾರೂಪವೆ ||
← ಶ್ರೀಶಾರದಾದೇವಿ ಜಿ.ಎಸ್. ಶಿವರುದ್ರಪ್ಪ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.