← ಶ್ರೀಶಾರದಾದೇವಿ

ಸಾರದಾ ರೂಪತಾಳಿ

📂 ಶ್ರೀಶಾರದಾದೇವಿ
✍️ ಸ್ವಾಮಿ ಶಾಸ್ತ್ರಾನಂದ
🏷️ ಕೀರ್ತನೆಗಳು
🎵 ರಾಗ: ಕಾನಡಾ
🥁 ತಾಳ: ಏಕತಾಲ
ಸಾರದಾ ರೂಪತಾಳಿ ಬಂದಿಹಳು ತಾಯಿ ಕಾಳಿ
ಅದನರಿತೆ ರಾಮಕೃಷ್ಣ ಪೂಜಿಸಿದರು ಭಾವ ತಾಳಿ ||
ಆದ್ಯಾಶಕ್ತಿ ನೀ ಮಾತೆ ಸರ್ವಜೀವಮುಕ್ತಿದಾತೆ |
ಮಹಾಲಕ್ಷ್ಮಿ ಸರಸ್ವತಿ ಗುಪ್ತರೂಪ ಜ್ಞಾನದಾತೆ ||
ಸೀತಾ ರಾಧಾ ಅನ್ನಪೂರ್ಣಾ
ಕಾಯ ಪಡೆದ ಭುವಿಯು ಧನ್ಯ |
ಪ್ರೇಮದಿಂದ ತಾಯಿಯೆಂದು
ಕರೆವ ಮನುಜ ಜಗದಿ ಮಾನ್ಯ ||
ದೀನಜನರ ಉದ್ಧರಿಸೆ
ದೀನರೂಪ ತಾಳಿ ಬಂದೆ |
ಅಭಯೇ ನೀನು ಉಭಯಕರದಿ
ಅಭಯವನ್ನು ನೀಡಲೆಂದೆ ||
← ಶ್ರೀಶಾರದಾದೇವಿ ಸ್ವಾಮಿ ಶಾಸ್ತ್ರಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.