← ಶ್ರೀಗುರು

ಗುರುವೆ ತಾಯಿ ಗುರುವೆ ತಂದೆ

📂 ಶ್ರೀಗುರು
✍️ ಸ್ವಾಮಿ ಪುರುಷೋತ್ತಮಾನಂದ
🏷️ ಕೀರ್ತನೆಗಳು
🎵 ರಾಗ: ದರಬಾರೀ ಕಾನಡಾ
🥁 ತಾಳ: ಏಕತಾಲ
ಗುರುವೆ ತಾಯಿ ಗುರುವೆ ತಂದೆ
ಗುರುವೆ ದೈವ ದಾತಾರ |
ಗುರುವೆ ಬಂಧು ದಯಾಸಿಂಧು
ಗುರುವೆ ಕೃಪೆಯ ಸಾಕಾರ ||

ಗುರುವೆ ಬ್ರಹ್ಮ ಗುರುವೆ ವಿಷ್ಣು
ಗುರುವೆ ವರ ಮಹೇಶ್ವರ |
ಗುರು ಪರತರ ಪರಬ್ರಹ್ಮ
ಗುರುವೆ ಸಕಲ ಆಧಾರ ||

ತಮವ ಕಳೆದು ಬೆಳಕ ತಂದ
ದೀನಬಂಧು ಗುರುವರ |
ಕರ್ಮಬಂಧ ತರಿದ ಧೀರ
ನಿನಗಿದೋ ನಮಸ್ಕಾರ ||
← ಶ್ರೀಗುರು ಸ್ವಾಮಿ ಪುರುಷೋತ್ತಮಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.