← ಶ್ರೀರಾಮಕೃಷ್ಣ

ಜಯ ದೇವ ದೇವ ಕರುಣಾವತಾರ

📂 ಶ್ರೀರಾಮಕೃಷ್ಣ
✍️ ಸ್ವಾಮಿ ವಾಗೀಶ್ವರಾನಂದ
🏷️ ಸ್ತೋತ್ರಗಳು
🎵 ರಾಗ: ಪೂರ್ವೀ
🥁 ತಾಳ: ತ್ರಿತಾಲ
ಜಯ ದೇವ ದೇವ ಕರುಣಾವತಾರ
ಜಗದೇಕಗಮ್ಯ ಸಂಸಾರಸಾರ||
ಮಾಯಾವಿಹೀನ ಸಚ್ಚಿತ್ ಸ್ವರೂಪ
ಲೀಲಾವಿಲಾಸ-ಧೃತಿವಿವಿಧರೂಪ|
ರಾಜಾಧಿರಾಜ ಭುವನೈಕರೂಪ
ಭೂತಾಧಿವಾಸ ಭವಕರ್ಣಧಾರ||
ಚೈತನ್ಯನಾಥ ಸ್ವಾನಂದಕಂದ
ಭವರೋಗವೈದ್ಯ ಜಿತ ನಿಖಿಲಬಂಧ।
ಅತುಲಪ್ರತಾಪ ರಿಪುದಲಕರಾಲ
ಸಾಧಕವಿಶುದ್ಧಮಾನಸವಿಹಾರ||
ವಿಶ್ವಪ್ರಣಮ್ಯ ತ್ರಯತಾಪನಾಶ
ಕಾಮಾದಿದೋಷಹರ ಚಿತ್ಪಕಾಶ!
ಪ್ರಣತೋSಸ್ಮಿನಾಥ ಶರಣಂ ಪ್ರಯಚ್ಚ
ಹೇ ರಾಮಕೃಷ್ಣ ಭವಭಯನಿವಾರ ||
← ಶ್ರೀರಾಮಕೃಷ್ಣ ಸ್ವಾಮಿ ವಾಗೀಶ್ವರಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.