← ಶ್ರೀರಾಮಕೃಷ್ಣ

ಬೇಗ ಬಾರೈ ದೇವದೇವ

📂 ಶ್ರೀರಾಮಕೃಷ್ಣ
✍️ ಸ್ವಾಮಿ ಪುರುಷೋತ್ತಮಾನಂದ
🏷️ ಕೀರ್ತನೆಗಳು
🎵 ರಾಗ: ಪಹಾಡೀ
🥁 ತಾಳ: ತ್ರಿತಾಲ
ಬೇಗ ಬಾರೈ ದೇವದೇವ
ದೀನಬಂಧು ರಾಮಕೃಷ್ಣ
ಎನ್ನ ಹೃದಯ ತಪಿಸುತಿಹುದು
ಇನಿತು ಸುಧೆಯ ಕರುಣಿಸೈ ||
ನಿನ್ನ ಮಹಿಮೆಯ ಕೇಳಿರುವೆನು
ಆದರೂ ಮನವು ಅರಿಯದು.||
ನಿನ್ನ ನೀನೇ ತೋರು ಎನಗೆ
ಅನ್ಯ ಉಪಾಯ ಕಾಣೆನು ||
← ಶ್ರೀರಾಮಕೃಷ್ಣ ಸ್ವಾಮಿ ಪುರುಷೋತ್ತಮಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.