← ಶ್ರೀದೇವಿ

ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ

📂 ಶ್ರೀದೇವಿ
✍️ ಸ್ವಾಮಿ ಪುರುಷೋತ್ತಮಾನಂದ
🏷️ ಕೀರ್ತನೆಗಳು
🎵 ರಾಗ: ಶಿವರಂಜಿನಿ
🥁 ತಾಳ: ಝಪತಾಲ
🎧
ಶ್ರವಣ ಮಾಡಿ
ಸ್ವಾಮಿ ಭಗವದಾನಂದ
ಅಮ್ಮ ಅಮ್ಮಾ ಎಂದು ಕರೆಯುತಿಹೆನಮ್ಮಾ
ಕರಕರೆಯಿದೆಂದೆನದೆ ಓಡಿ ಬಾರಮ್ಮಾ||

ಯಾರ ದೋಷಗಳೆಷ್ಟು ನನಗೇಕೆ ಬೇಕು।
ನನ್ನ ದೋಷವ ತಿದ್ದಿ ನೀ ಸಲಹಬೇಕು||

ಪಾಪಿಗಳನುದ್ಧರಿಪ ನೀ ದಯಾಸಿಂಧು|
ನೀಡೆನಗೆ ಕರುಣೆಯಿಂ ಆ ಕೃಪೆಯ ಬಿಂದು||

ತಾಯಿ ನೀನಿರುತಿರಲು ತಬ್ಬಲಿಯೆ ನಾನು|
ವಾತ್ಸಲ್ಯಸುಧೆಯುಣಿಸಲಾರೆಯಾ ನೀನು||

ಜ್ಞಾನ ಭಕ್ತಿ ವಿವೇಕ ವೈರಾಗ್ಯ ನೀಡು|
ಎನ್ನ ಹೃನ್ಮಂದಿರದಿ ನಿತ್ಯ ನಲಿದಾಡು||
← ಶ್ರೀದೇವಿ ಸ್ವಾಮಿ ಪುರುಷೋತ್ತಮಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.