← ಶ್ರೀರಾಮ

ರಾಮ ಪಾಲಯ

📂 ಶ್ರೀರಾಮ
✍️ ನರಸಿಂಹದಾಸ
🏷️ ಕೀರ್ತನೆಗಳು
🎵 ರಾಗ: ಮೇಘ ಮಲ್ಲಾರ
🥁 ತಾಳ: ತ್ರಿತಾಲ
ರಾಮ ಪಾಲಯ | ದಶರಥ | ರಾಮ ಪಾಲಯ ||
ರಾಮರೂಪಜಿತಕಾಮ ನಿರಂತರ |
ತರುಣಾರುಣಮೃದುಚರಣಾಂಬುಜಯುಗ ||
ಅಮಲಕಮಲನಿಜನಾಭಿವಿರಾಜಿತ |
ಹರಸುರಸರಸಿಜಭವಗರುಡಾರ್ಚಿತ ||
ವಸುಧೇಶ್ವರದಶಶಿರಮದಖಂಡನ
ಇಂದುವದನದಶಸ್ಯಂದನನಂದನ ||
ಕರುಣಾಕರತರಣಿಜವರದಾಯಕ |
ವರನರಸಿಂಹದಾಸಾರ್ಚಿತಪಾದುಕ ||
← ಶ್ರೀರಾಮ ನರಸಿಂಹದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.