← ಶ್ರೀಗುರು

ವನಸುಮದೊಲೆನ್ನ

📂 ಶ್ರೀಗುರು
✍️ ಡಿ.ವಿ.ಜಿ.
🏷️ ಕೀರ್ತನೆಗಳು
🎵 ರಾಗ: ಅಸಾವೇರೀ
🥁 ತಾಳ: ಝಪತಾಲ
🎧
ಶ್ರವಣ ಮಾಡಿ
ವಿದ್ವಾನ್ ಶ್ರೀ ಗುರುರಾಜ್
ವನಸುಮದೊಲೆನ್ನ ಜೀ -
ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ ಹೇ ದೇವ ||

ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ ||

ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ |

ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ -
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ||

ಉಪಕಾರಿ ನಾನು ಎ -
ನ್ನುಪಕೃತಿಯು ಜಗಕೆಂಬ
ವಿಪರೀತಮತಿಯನುಳಿದು |

ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾ -
ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು ||
← ಶ್ರೀಗುರು ಡಿ.ವಿ.ಜಿ. ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.