← ಶ್ರೀರಾಮಕೃಷ್ಣ

ವಿಪ್ರವನಿತೆಯಂಕದಲ್ಲಿ

📂 ಶ್ರೀರಾಮಕೃಷ್ಣ
🏷️ ಕೀರ್ತನೆಗಳು
🎵 ರಾಗ: ಕಾಂಬೋಧಿ
🥁 ತಾಳ: ರೂಪಕತಾಳ
🎧
ಶ್ರವಣ ಮಾಡಿ
ಸ್ವಾಮಿ ಭಗವದಾನಂದ
ವಿಪ್ರವನಿತೆಯಂಕದಲ್ಲಿ
ನಲಿವನಾರು ಬೆಳಕ ಚೆಲ್ಲಿ|
ಧರಿಸಿ ದಿಶೆಯ ಚೆಲುವ ಕುವರ
ಒಲಿದು ಬಂದೆ ಬಡಕುಟೀರ ||

ಭೂತಲಕೆ ಇಳಿದು ಬಂದೆ
ಯಾರು ನೀನು ಕಣ್ಮಣಿ |
ಆರ್ತ ಜನರ ತಾಪ ಕಳೆಯೆ
ಸುರಿಸಿ ಕರುಣೆ ಕಂಬನಿ ||

ನೊಂದ ಜನಕೆ ನೆರವ ನೀಡೆ
ಬಂದೆಯೇನು ಗೋಪ್ಯವಾಗಿ |
ಕಂದ ಮೊಗದಿ ಕರುಣೆ ತಳೆದು
ಅಳುವೆ ನಗುವೆ ಯಾರಿಗಾಗಿ ||

ರೂಪರಾಶಿ ಕಂಡು ನಿನ್ನ
ಸೆಳೆಯಲಾರೆ ನೆಟ್ಟ ಕಣ್ಣ|
ತಾಪತಿಮಿರನಾಶಿ ನಿನ್ನ
ತೋಳಲೆತ್ತಿಕೊಂಬೆ ಚಿನ್ನ ||
← ಶ್ರೀರಾಮಕೃಷ್ಣ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.