← ಶ್ರೀಗುರು

ಶರೀರವೆಂತೆಂಬುವ ಹೊಲವ

📂 ಶ್ರೀಗುರು
✍️ ಸರ್ಪಭೂಷಣ ಶಿವಯೋಗಿ
🏷️ ಕೀರ್ತನೆಗಳು
🎵 ರಾಗ: ಮಾಲಕೌಂಸ್
🥁 ತಾಳ: ಕವ್ವಾಲೀ
ಶರೀರವೆಂತೆಂಬುವ ಹೊಲವ ಹಸನು ಮಾಡಿ
ಪರತತ್ತ್ವಬೆಳೆಯನೆ ಬೆಳೆದುಣ್ಣಿರೋ ||
ಶಮೆದಮೆಯೆಂದೆಂಬ ಎರಡೆತ್ತುಗಳ ಹೂಡಿ
ವಿಮಲಮಾನಸವ ನೇಗಿಲವನೆ ಮಾಡಿ
ಮಮಕಾರವೆಂದೆಂಬ ಕರಿಕೆಯ ಕಳೆದಿಟ್ಟು
ಸಮತೆಯೆಂದೆಂಬುವ ಗೊಬ್ಬರ ಚೆಲ್ಲಿ ||
ಗುರುವರನುಪದೇಶವೆಂಬ ಬೀಜವ ಬಿತ್ತಿ
ಮೆರೆವ ಸಂಸ್ಕಾರವೃಷ್ಟಿಯ ಬಲದಿ
ಅರಿವೆಂಬ ಪೈರನೆ ಬೆಳೆಸುತ ಮುಸುಗಿರ್ದ
ದುರಿತದುರ್ಗುಣವೆಂಬ ಕಳೆಯನು ಕಿತ್ತು ||
ಚಿರಮುಕ್ತಿಯೆಂದೆಂಬ ಧಾನ್ಯವ ಬೆಳೆದುಂಡು
ಪರಮಾನಂದದೊಳು ದಣ್ಣನೆ ದಣಿದು
ಗುರುಸಿದ್ದನಡಿಗಳಿಗೆರಗುತ್ತ ಭವವೆಂಬ
ಬರವನು ತಮ್ಮ ಸೀಮೆಗೆ ಕಳುಹಿ ||
← ಶ್ರೀಗುರು ಸರ್ಪಭೂಷಣ ಶಿವಯೋಗಿ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.