← ಶ್ರೀಶಿವ

ಶಿವ ನಿನ್ನ ಪಾದವ ನಂಬಿದೆ

📂 ಶ್ರೀಶಿವ
🏷️ ಕೀರ್ತನೆಗಳು
🎵 ರಾಗ: ಭೈರವ್
🥁 ತಾಳ: ತೇವರಾ
ಶಿವ ನಿನ್ನ ಪಾದವ ನಂಬಿದೆ | ಎನ್ನ
ಕಾಯುವ ಭಾರವು ನಿನ್ನದು ಎಂದೆ ||

ನಾನೆಂಬ ಮಮಕಾರದಿಂದೆ | ನಾನಾ
ಜನ್ಮವ ತಿರುಗಿ ನಾ ಬಂದೆ |
ಗತಿ ಯಾವುದೆನಗಿನ್ನು ತೋರದು ಮುಂದೆ
ದೀನರಕ್ಷಕನಯ್ಯೋ ಬಾರಯ್ಯ ತಂದೆ ||

ಭಕುತರ ಬಂಟ ನೀನಂತೆ | ಮುನ್ನ
ಬಾಣನ ಬಾಗಿಲ ಕಾಯ್ದವನಂತೆ।
ಫಾಲಲೋಚನ ನಿನ್ನ ಭಜಿಸಿದ ಉಪಮನ್ಯು
ಕ್ಷೀರವಾರಿಧಿಯಿತ್ತು ಸಲಹಿದೆ ತಂದೆ ||
← ಶ್ರೀಶಿವ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.