← ಶ್ರೀಗಣೇಶ

ಲಂಬೋದರ ಲಕುಮಿಕರ

📂 ಶ್ರೀಗಣೇಶ
✍️ ಪುರಂದರದಾಸ
🏷️ ಕೀರ್ತನೆಗಳು
ಲಂಬೋದರ ಲಕುಮಿಕರ
ಅಂಬಾಸುತ ಅಮರ ವಿನುತ ||ಪ.||
ಶ್ರೀ ಗಣನಾಥ ಸಿಂಧುರ ವರ್ಣ
ಕರುಣ ಸಾಗರ ಕರಿವದನ ||೧||
ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೇ ನಮೋ ನಮೋ ||೨||
ಸಕಲ ವಿದ್ಯಾ ಆದಿ ಪೂಜಿತ
ಸರ್ವೋತ್ತಮ ತೇ ನಮೋ ನಮೋ ||೩||
← ಶ್ರೀಗಣೇಶ ಪುರಂದರದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.