← ಶ್ರೀಕೃಷ್ಣ

ರಂಗ ಬಾರೋ ಪಾಂಡುರಂಗ ಬಾರೋ

📂 ಶ್ರೀಕೃಷ್ಣ
✍️ ಪುರಂದರದಾಸ
🏷️ ಕೀರ್ತನೆಗಳು
🎵 ರಾಗ: ಶಂಕರಾಭರಣ
🥁 ತಾಳ: ಆದಿತಾಳ
ರಂಗ ಬಾರೋ ಪಾಂಡುರಂಗ ಬಾರೋ
ಶ್ರೀರಂಗ ಬಾರೋ ನರಸಿಂಗ ಬಾರೋ
ಕಂದ ಬಾರೋ ಎನ್ನ ತಂದೆ ಬಾರೋ
ಇಂದಿರಾರಮಣ ಮುಕುಂದ ಬಾರೋ ||
ಅಪ್ಪ ಬಾರೋ ತಿಮ್ಮಪ್ಪ ಬಾರೋ
ಕಂದರ್ಪನಯ್ಯನೆ ಕಂಚಿ ವರದ ಬಾರೋ ||
ಅಣ್ಣ ಬಾರೋ ಎನ್ನ ಚಿನ್ನ ಬಾರೋ
ಪುಣ್ಯಮೂರ್ತಿ ಮಹಿಷಪುರಿಯ ಚೆನ್ನ ಬಾರೋ ||
ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ
ಎನ್ನಿಷ್ಟಮೂರ್ತಿ ಪುರಂದರ ವಿಠಲ ಬಾರೋ ||
← ಶ್ರೀಕೃಷ್ಣ ಪುರಂದರದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.