← ಶ್ರೀಕೃಷ್ಣ

ಬೋಧವೊಂದೇ ಬ್ರಹ್ಮನಾದವೊಂದೇ

📂 ಶ್ರೀಕೃಷ್ಣ
✍️ ಶಿಶುನಾಳ ಷರೀಫ್
🏷️ ಕೀರ್ತನೆಗಳು
🎵 ರಾಗ: ಜೋಗಿಯಾ
🥁 ತಾಳ: ತೇವಾರಾ
ಬೋಧವೊಂದೇ ಬ್ರಹ್ಮನಾದವೊಂದೇ
ಸಾಧನ ಮಾಡುವ ಹಾದಿ ಒಂದೇ
ಆದಿ ಪಥ ಒಂದೇ ॥
ಬಿಂದು ಒಂದೇ ನಿಜಾನಂದ ಒಂದೇ
ತಂದೆ ಸದ್ಗುರು ಗೋವಿಂದ ಒಂದೇ
ಅಂದಿಗಿಂದಿಗೊಂದೇ ॥
ದೋಷ ಒಂದೇ ನಿರ್ದೋಷ ಒಂದೇ
ಶಿಶುನಾಳಾಧೀಶನ ಭಾಷೆ ಒಂದೇ
ಭವನಾಶ ಒಂದೇ ॥
← ಶ್ರೀಕೃಷ್ಣ ಶಿಶುನಾಳ ಷರೀಫ್ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.