← ಶ್ರೀಶಿವ
ಒಲೆ ಹತ್ತಿ ಉರಿದಡೆ ನಿಲ್ಲಬಹುದಲ್ಲದೆ
ಒಲೆ ಹತ್ತಿ ಉರಿದಡೆ ನಿಲ್ಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲ್ಲಬಹುದೆ ॥
ಏರಿ ನೀರುಂಬಡೆ, ಬೇಲಿ ಹೊಲ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ, '
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ನಾ ದೂರಲೊ ದೇವ
ಕೂಡಲ ಸಂಗಮದೇವಾ ॥
ಧರೆ ಹತ್ತಿ ಉರಿದಡೆ ನಿಲ್ಲಬಹುದೆ ॥
ಏರಿ ನೀರುಂಬಡೆ, ಬೇಲಿ ಹೊಲ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ, '
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ನಾ ದೂರಲೊ ದೇವ
ಕೂಡಲ ಸಂಗಮದೇವಾ ॥