← ಶ್ರೀಮಹಾಲಕ್ಷ್ಮಿ

ಭಾರತಿದೇವಿಯ ನೆನೆ ನೆನೆ

📂 ಶ್ರೀಮಹಾಲಕ್ಷ್ಮಿ
✍️ ಪುರಂದರದಾಸ
🏷️ ಕೀರ್ತನೆಗಳು
🎵 ರಾಗ: ಖರಹರಪ್ರಿಯ
🥁 ತಾಳ: ಆದಿತಾಳ
ಭಾರತಿದೇವಿಯ ನೆನೆ ನೆನೆ
ನಿರತ ಭಕುತಿಗಿದು ಮನೆ ಮನೆ ॥

ಮಾರುತನರ್ಧಾಂಗಿ ಸುಚರಿತ ಕೋಮಲಾಂಗಿ
ಸಾರಸಾಕ್ಷಿ ಕೃಪಾಂಗಿ ಅಪಾಂಗಿ ॥

ಕಿಂಕಿಣಿ ಕಿಣಿಪಾದ ಪಂಕಜ ನೂಪುರ
ಕಂಕಣ ಕುಂಡಲಾಲಂಕೃತ ದೇಹ॥

ಶಂಕರ ಸುರವರ ವಂದಿತ ಚರಣೆ
ಕಿಂಕರಿ ಪುರಂದರ ವಿಟ್ಠಲನ ಕರುಣೆ ॥
← ಶ್ರೀಮಹಾಲಕ್ಷ್ಮಿ ಪುರಂದರದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.