← ಶ್ರೀರಾಮಕೃಷ್ಣ

ಶ್ರೀ ರಾಮಕೃಷ್ಣಪ್ರಭೋ ದೇವ

📂 ಶ್ರೀರಾಮಕೃಷ್ಣ
✍️ ಸ್ವಾಮಿ ಹರ್ಷಾನಂದ
🏷️ ಕೀರ್ತನೆಗಳು
🎵 ರಾಗ: ದುರ್ಗಾ
🥁 ತಾಳ: ತ್ರಿತಾಲ
ಶ್ರೀರಾಮಕೃಷ್ಣಪ್ರಭೋ ದೇವ || ಪ ||
ಆರತಿಯೆತ್ತುವೆ ಹರಿಹರಬ್ರಹ್ಮನೆ || ಅ.ಪ. ||
ಭವಬಂಧನವನು ಖಂಡಿಸುವವನೆ
ನವನವ ರೂಪಧರ ||
ಭಕುತರ ಪ್ರೇಮಕೆ ಮಣಿದರು ನಲಿದರು
ನಿಷ್ಕಲ ನಿರುಪಮನೆ ||
ಸಂಪದ ರಾಜಪದ ಇಂದ್ರಪದ ಈಯದೆ
ಶ್ರೀಪದ ಕೊಡು ಹರಿಯೇ ||
ಹೃದಯಕಮಲದಲಿ ಸತತವು ನೆಲಸುತ
ಮೋದವ ಸುರಿಸು ಗುರೋ ||
← ಶ್ರೀರಾಮಕೃಷ್ಣ ಸ್ವಾಮಿ ಹರ್ಷಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.