← ಶ್ರೀಶಾರದಾದೇವಿ

ಶ್ರೀಶಾರದಾದೇವಿ ಹೇ ಮಹಾಮಾತೆ

📂 ಶ್ರೀಶಾರದಾದೇವಿ
✍️ ಕುವೆಂಪು
🏷️ ಕೀರ್ತನೆಗಳು
🎵 ರಾಗ: ಭೂಪಾಲೀ
🥁 ತಾಳ: ಝಪತಾಲ
ಶ್ರೀಶಾರದಾದೇವಿ ಹೇ ಮಹಾಮಾತೆ
ಶ್ರೀರಾಮಕೃಷ್ಣ ಗುರುದೇವ ಸಂಪ್ರೀತೆ |
ಪರಮಪಾವನಹೃದಯೆ ಕಲಿಯುಗದ ಸೀತೆ
ಭಕ್ತಿಯಿಂದಾರಾಧಿಪೆವು ನಿನ್ನನಮ್ಮ||
ಗಗನದಂತಿಹುದಮ್ಮ ನಿನ್ನ ಗಾಂಭೀರ್ಯ
ನಿನ್ನ ತೇಜದ ಭಾಗವೀ ನಮ್ಮ ಸೂರ್ಯ|
ನೀ ಕಾಳಿ ನೀ ಲಕ್ಷ್ಮಿನೀ ಬಿಜ್ಜೆಯಮ್ಮ
ಮಕ್ಕಳಾಗಿಹ ನಮ್ಮ ಪೊರೆ ಶಕ್ತಿಯಮ್ಮ||
ಮಹಿಮೆ ಮಹಿಮೆಯನರಿವುದೆಂದೆಂಬರಮ್ಮ
ಗುರುವರ್ಯನಂ ತಿಳಿದ ನೀ ಮಹಿಮಳಮ್ಮ|
ಪತಿಭಕ್ತಿಯದೆ ಮುಕ್ತಿ ನಿನಗಾಯಿತಮ್ಮ
ಪರಶಕ್ತಿ ನೀನಮ್ಮನಮ್ಮ ಸಲಹಮ್ಮ||
ನಿನ್ನ ನಾಮವೆ ಜನನಿ ಸುರನದಿಯ ತೀರ್ಥ
ಎಲೆ ತಾಯೆ, ನೀನೇ ಪವಿತ್ರತಮ ತೀರ್ಥ |
ನಿನ್ನ ಪೂಜೆಯೆ ಭಕ್ತಿ, ಸಾಧನ ವಿರಕ್ತಿ
ನಿನ್ನ ನೆನೆವುದೆ ನಮಗೆ ಗುರು ತಪಶ್ಯಕ್ತಿ ||
← ಶ್ರೀಶಾರದಾದೇವಿ ಕುವೆಂಪು ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.