← ಶ್ರೀಕೃಷ್ಣ

ಮನಸು ಕರಗದೇ ಸ್ವಾಮಿ

📂 ಶ್ರೀಕೃಷ್ಣ
✍️ ಲಿಂಗಸೂರು ಯೋಗೀಂದ್ರಪ್ಪ
🏷️ ಕೀರ್ತನೆಗಳು
🎵 ರಾಗ: ಕಾನಡಾ
🥁 ತಾಳ: ರೂಪಕತಾಳ
ಮನಸು ಕರಗದೇ ಸ್ವಾಮಿ॥
ದೀನನಾಗಿ ನಿನ್ನ ಪಾದವನ್ನು ನಂಬಿದೆನೋ ಸ್ವಾಮಿ ॥

ಒಡಲಿಗೋಸುಗವಾಗಿ ಪರರ
ಅಡಿಗಳಿಗೆ ನಮಿಸಿ ಅವರ
ಬಿರುನುಡಿಗಳ ಕೇಳಲಾರೆ
ಬೇಡಲಾರೆ ಮುರಾರೇ ॥

ಜನನಿ ಜನಕ ನೀನೇ ಎಂದು
ನಿನ್ನ ನಂಬಿದೆನೋ ಬಂಧು
ಎನ್ನ ಪಾಲಿಸೋ ಬೇಗ ಬಂದು
ಮನ್ನಿಸಯ್ಯ ಕೃಪಾಸಿಂಧು ॥

ದಿನವು ಕಳೆದು ಹೋಯಿತಲ್ಲಾ
ಪ್ರಾಣೇಶ ವಿಟ್ಠಲಾ
ಮನ್ನಿಸುವರು ಒಬ್ಬರಿಲ್ಲ
ಕಾಯೋ ಬಾಲಗೋಪಾಲ ॥
← ಶ್ರೀಕೃಷ್ಣ ಲಿಂಗಸೂರು ಯೋಗೀಂದ್ರಪ್ಪ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.