← ಶ್ರೀಕೃಷ್ಣ

ಶ್ರೀಹರಿ ಕಾಯೋ ಕರುಣಾನಿಧೇ

📂 ಶ್ರೀಕೃಷ್ಣ
✍️ ಮಹೀಪತಿದಾಸ
🏷️ ಕೀರ್ತನೆಗಳು
🎵 ರಾಗ: ಹಮೀರ್ - ಕೇದಾರ್
🥁 ತಾಳ: ತ್ರಿತಾಲ
ಶ್ರೀಹರಿ ಕಾಯೋ ಕರುಣಾನಿಧೇ ||
ಖಗವರಗಮನ ಕರುಣಾನಿಧೇ ||
ಜ್ಞಾನ ಧ್ಯಾನದ ನಿಜ ಸಾಧನವರಿಯೆ |
ನೀನೆ ಗತಿಯೆನುತ ಮಾಡುವೆ ನಮನ ||
ಘೋರ ಸಂಸಾರದಿ ತಾಪದಿ ನೊಂದೆ |
ವಾರಿಭವಭಯಹರ ಅಘಕುಲಶಮನ ||
ಗುರು ಮಹೀಪತಿ ಪ್ರಭು ಅನಾಥಬಂಧು |
ಚರಣಕಮಲಗಳಲಿರಿಸೆನ್ನ ಮನವ ||
← ಶ್ರೀಕೃಷ್ಣ ಮಹೀಪತಿದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.