← ವೈರಾಗ್ಯ

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ

📂 ವೈರಾಗ್ಯ
✍️ ಪುರಂದರದಾಸ
🏷️ ಕೀರ್ತನೆಗಳು
🎵 ರಾಗ: ಬಾಗೇಶ್ರೀ
🥁 ತಾಳ: ಸುರಫಾಕ್ತಾ
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ ॥

ದಿವರಾತ್ರಿಯೆನ್ನದೆ ವಿಷಯ ಲಂಪಟನಾಗಿ
ಸವಿಯೂಟಗಳನುಂಡು ಭ್ರಮಿಸಬೇಡ `
ಅವನ ಕೊಂದಿವನ ಕೊಂದು ಅರ್ಥವನು ಗಳಿಸುವರೆ
ಜವನ ದೂತರು ಬರುವ ಹೊತ್ತ ನೀನರಿಯೆ ॥

ಅಟ್ಟಡಿಗೆಯುಣಲಿಲ್ಲ ಇಷ್ಟದರುಶನವಿಲ್ಲ
ಕೊಟ್ಟ ಸಾಲವ ಕೇಳ್ವ ಹೊತ್ತನರಿಯೆ
ಕಟ್ಲೆ ತುಂಬಿದ ಮೇಲೆ ಕ್ಷಣ ಮಾತ್ರ ಇರಲಿಲ್ಲ
ಅಷ್ಟರೊಳು ಪುರಂದರ ವಿಟ್ಫಲನ ನೆನೆ ಮನವೆ ॥
← ವೈರಾಗ್ಯ ಪುರಂದರದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.