← ಶ್ರೀಸ್ವಾಮಿ ವಿವೇಕಾನಂದ

ಸಪ್ತಋಷಿ ಭುವನದಿಂದ

📂 ಶ್ರೀಸ್ವಾಮಿ ವಿವೇಕಾನಂದ
✍️ ಸ್ವಾಮಿ ತದ್ರೂಪಾನಂದ
🏷️ ಕೀರ್ತನೆಗಳು
🎵 ರಾಗ: ಸಿಂಧುಭೈರವೀ
🥁 ತಾಳ: ಕವಾಲೀ
ಸಪ್ತಋಷಿ ಭುವನದಿಂದ
ಇಳೆಗಿಳಿದು ಬಂದ |
ಶ್ರೀಗುರುದೇವನ ಕಂದ
ವಿವೇಕಾನಂದ ||
ತ್ಯಾಗವಿರಾಗದ ಕಡಲು
ಭೋಗಗಳ ಸಿಡಿಲು |
ಜಗಜನರಿಗೆ ತಾಯ್ಮಡಿಲು
ಹರನ ನರನೊಡಲು ||
ಆತ್ಮಜ್ಞಾನದ ಕಾಂತಿ
ಮೋಹದುಪಶಾಂತಿ |
ಬಳಲಿದರಿಗೆ ವಿಶ್ರಾಂತಿ
ನೀಗಿರುವೆ ಭ್ರಾಂತಿ ||
ಮಿರುಗುವ ವಿದ್ಯಾಸೂರ್ಯ
ನಿಸ್ಸಿಮವೀರ್ಯ |
ಮೇರೆಯ ಅರಿಯದ ಧೈರ್ಯ
ಎಸಗೆ ಗುರುಕಾರ್ಯ ||
← ಶ್ರೀಸ್ವಾಮಿ ವಿವೇಕಾನಂದ ಸ್ವಾಮಿ ತದ್ರೂಪಾನಂದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.