← ಶ್ರೀಹನುಮಂತ

ಎಲ್ಲಿರುವೆ ತಂದೆ ಬಾರೋ ಮಾರುತಿ

📂 ಶ್ರೀಹನುಮಂತ
✍️ ಶೇಷಗಿರಿದಾಸ
🏷️ ಕೀರ್ತನೆಗಳು
🎵 ರಾಗ: ಬೇಹಾಗ್
🥁 ತಾಳ: ತ್ರಿತಾಲ
ಎಲ್ಲಿರುವೆ ತಂದೆ ಬಾರೋ ಮಾರುತಿ ॥

ಎಲ್ಲೆಲ್ಲಿ ನೋಡಿದರೆ ಅಲ್ಲಿ ನಿನ್ನ ಕೀರುತಿ
ಎಲ್ಲಿ ನೋಡಲು ನಿನ್ನ ಕೂಡಿರುವ ಶ್ರೀಪತಿ ॥

ಅಂದು ರಘುನಂದನನ ವಂದಿಸುತ ಇಂದಿರೆಯ
ಕಂಡು ಕೊಂಡಾಡಿದ್ಯಲ್ಲೋ॥

ರಂಗನರ್ಧಾಂಗಿಗೆ ಉಂಗುರವಿತ್ತು ವನ
ಭಂಗವ ಮಾಡಿದ್ಯಲ್ಲೋ॥

ರಕ್ಕಸರ ಸೊಕ್ಕು ಮುರಿದು ಲಂಕೆಗೆ ಉರಿ
ಇಕ್ಕಿ ಓಡಾಡಿದ್ಯಲ್ಲೋ ॥

ಮಂದಮತಿ ಇಂದ್ರಜಿತು ನಿಂದಿಸಲು ನೀ ದಶ
ಕಂಧರನ ಗುದ್ದಿದ್ಯಲ್ಲೋ॥

ಶೇಷಗಿರಿವಾಸನ ದಾಸನೇ ನಿನ್ನ
ದಾಸನಲಿ ದಯಮಾಡೋ ಮಾರುತಿ ॥
← ಶ್ರೀಹನುಮಂತ ಶೇಷಗಿರಿದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.