← ಶ್ರೀಮಹಾಕಾಳಿ

ಸಾಗುತಿಹುದು ಚಿತ್ತಭೃಂಗ

📂 ಶ್ರೀಮಹಾಕಾಳಿ
✍️ ವಚನವೇದ
🏷️ ಕೀರ್ತನೆಗಳು
🎵 ರಾಗ: ಭೂಪಾಲೀ
🥁 ತಾಳ: ದಾದರಾ
ಸಾಗುತಿಹುದು ಚಿತ್ತಭೃಂಗ
ಕಾಳೀಪದ ನೀಲಕಮಲ ಮಧುಪಾನದ ಆಸೆಗೆ |
ಸಕಲ ವಿಷಯ-ಕುಸುಮರಸವು
ಎಷ್ಟಾದರು ತುಚ್ಛವೆಂದು
ತಿಳಿಯಿತಿಂದು ಮನಸಿಗೆ ||

ತಾಯ ಪಾದಕಮಲ ನೀಲ
ಮಧು ಕುಡಿಯುವ ಭೃಂಗ ನೀಲ
ನೀಲದಲ್ಲಿ ನೀಲ ಸೇರಿ
ನೀಲವಾದ ಪರಿಯನು
ಕಂಡು ಬೆರಗುವಡುವನು ||

ಸುಖ ಬಂದರೆ ಹಿಗ್ಗದೆ
ನೋವಿನಲ್ಲಿ ಕುಗ್ಗದೆ
ಆನಂದಸಿಂಧುವಿನಲಿ
ನಿರುತ ತೇಲುತಿರುವನು
ಭಕ್ತ ಕಮಲಾಕಾಂತನು ||
← ಶ್ರೀಮಹಾಕಾಳಿ ವಚನವೇದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.