← ಶ್ರೀಶಿವ
ಸುಂದರ ಸತ್ಯ ಶಿವ ಗಣ ನಾಥ
ಸುಂದರ ಸತ್ಯ ಶಿವ ಗಣ ನಾಥ
ಸುರಚಿರ ನಿತ್ಯದುರಿತ ಪರಿಹಾರ ॥
ಆದಿದೇವ ಜಗದಂತರಯಾಮಿ
ಆದಿ ಮಧ್ಯ ಕೊನೆಯಿಲ್ಲದ ಸ್ವಾಮಿ
ಆರನು ಮೀರಿದ ಪರಶಿವ ಕಾಮಿ
ಆಶ್ರಮ ಪ್ರಥಮ ವಿರಾಜ ನಮಾಮಿ ॥
ಅಂದು ಇಂದು ಎಂದೆಂದಿಗಾದರೂ
ಬಂದು ತಂದೆ ನೀನೆಲ್ಲ ಸಲಹಿದೇ
ಇಂದುಧರನ ಸುತ ಮಂಗಲದಾತ
ಪೊಂದುವ ನಿನ್ನನು ಪರಿಯನು ಪೇಳ ॥
ಶರಣು ಶರಣು ವರದಾಯಕ ದೊರೆಯೆ
ಪರಮ ವಿರಾಗಿ ವಿಶಾಲ ವಿಚಾರಿಯೆ
ಉರಗಾಚಲನ ಮಂಗಲ ಸಿರಿಯೆ
ಅರೆನಿಮಿಷಾರ್ಧ ನಿನ್ನಾ ಮರೆಯೆ ॥
ಸುರಚಿರ ನಿತ್ಯದುರಿತ ಪರಿಹಾರ ॥
ಆದಿದೇವ ಜಗದಂತರಯಾಮಿ
ಆದಿ ಮಧ್ಯ ಕೊನೆಯಿಲ್ಲದ ಸ್ವಾಮಿ
ಆರನು ಮೀರಿದ ಪರಶಿವ ಕಾಮಿ
ಆಶ್ರಮ ಪ್ರಥಮ ವಿರಾಜ ನಮಾಮಿ ॥
ಅಂದು ಇಂದು ಎಂದೆಂದಿಗಾದರೂ
ಬಂದು ತಂದೆ ನೀನೆಲ್ಲ ಸಲಹಿದೇ
ಇಂದುಧರನ ಸುತ ಮಂಗಲದಾತ
ಪೊಂದುವ ನಿನ್ನನು ಪರಿಯನು ಪೇಳ ॥
ಶರಣು ಶರಣು ವರದಾಯಕ ದೊರೆಯೆ
ಪರಮ ವಿರಾಗಿ ವಿಶಾಲ ವಿಚಾರಿಯೆ
ಉರಗಾಚಲನ ಮಂಗಲ ಸಿರಿಯೆ
ಅರೆನಿಮಿಷಾರ್ಧ ನಿನ್ನಾ ಮರೆಯೆ ॥