← ಶ್ರೀಮಹಾಲಕ್ಷ್ಮಿ

ಶ್ರೀನಿವಾಸನ ರಾಣಿ ವಾಣೀ

📂 ಶ್ರೀಮಹಾಲಕ್ಷ್ಮಿ
🏷️ ಕೀರ್ತನೆಗಳು
🎵 ರಾಗ: ಭಟಿಯಾರ್‌
🥁 ತಾಳ: ಝಪತಾಳ
ಶ್ರೀನಿವಾಸನ ರಾಣಿ ವಾಣೀ ಪತಿಪ್ರಿಯಜನನಿ
ದಾನಿ ಹರನಭಿಮಾನಿ ಜ್ಞಾನಿವರ ಮಹಾ ಲಕುಮಿ

ವಿದ್ಯೆ ಧನ ಅನ್ನ ಸಿರಿ ಬುದ್ಧಿ ಬಲಕೀರ್ತಿ ಸಿರಿ
ಸಿದ್ಧಿ ಸಿರಿ ವಿಶ್ವಂಭರಿ ವೇದಸಿರಿ ಗಾಯತ್ರಿ

ಶರಧಿಸುತೆ ಸುಖದಾತೆ ಧರಣಿಪರಮಪವಿತ್ರೆ
ಉರಗಾಚಲೇಂದ್ರಯುತೆ ಶರಣು ಶಕ್ತಿ ವಿದಾತೆ
← ಶ್ರೀಮಹಾಲಕ್ಷ್ಮಿ

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.