← ಶ್ರೀಶಿವ

ಎಲ್ಲಾ ರೂಪವು ತಾನಂತೆ ಶಿವ

📂 ಶ್ರೀಶಿವ
✍️ ಶಿವರಾಮಶಾಸ್ತ್ರೀ
🏷️ ಕೀರ್ತನೆಗಳು
🎵 ರಾಗ: ಧನ್ಯಾಸಿ
🥁 ತಾಳ: ಆದಿತಾಳ
ಎಲ್ಲಾ ರೂಪವು ತಾನಂತೆ ಶಿವ-
ನೆಲ್ಲೆಲ್ಲಿಯು ತಾನಿಹನಂತೆ
ಅಲ್ಲಲ್ಲರಸುತ ಗುಡಿಗಳ ತಿರುಗುವ
ಕಳ್ಳರ ಕಣ್ಣಿಗೆ ಮಣ್ಣಂತೆ ॥

ಕಣ್ಣೆಂಬುದು ತನಗಿಲ್ಲಂತೆ
ಕಣ್ಣಿಗೆ ಕಣ್ಣಾಗಿಹನಂತೆ
ಕಣ್ಣು ಬಿಟ್ಟು ತನ್ನರಸುವ ಜನರಿಗೆ
ಬಣ್ಣ-ಬಣ್ಣವಾಗಿಹನಂತೆ ||

ದೃಶ್ಯವಿದಾದವ ತಾನಂತೆ
ದೃಶ್ಯವನರಿವನು ತಾನಂತೆ
ದೃಶ್ಯಾದೃಕ್ಕಿನೊಳೆರಡರ ನಡುವೆ
ಶಾಶ್ವತನಾದವ ತಾನಂತೆ ॥

ಕಳೆದುಳಿಯುವುದೇ ತಾನಂತೆ
ಉಳಿಯುವ ಕಳೆಯುವರಿಲ್ಲಂತೆ
ಕುಲಶೀಲಗಳೆಂಬ ಕೊಳೆಯಿಲ್ಲದೆ ನಿರ್‌-
ಮಲದೊಳಗಿರುವನು ತಾನಂತೆ ॥
← ಶ್ರೀಶಿವ ಶಿವರಾಮಶಾಸ್ತ್ರೀ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.