← ಜಾನಪದ ಗೀತೆ

ತರವಲ್ಲ ತಗಿ ನಿನ್ನ ತಂಬೂರಿ ಸ್ವರ

📂 ಜಾನಪದ ಗೀತೆ
✍️ ಶಿಶುನಾಳ ಷರೀಫ್
🏷️ ಜಾನಪದ ಗೀತೆ
ತರವಲ್ಲ ತಗಿ ನಿನ್ನ ತಂಬೂರಿ ಸ್ವರ
ಬರದೇ ಬಾರಿಸದಿರು ತಂಬೂರಿ
ಸರಸ ಸಂಗೀತದ ಕುರುಹುಗಳ ಅರಿಯದೆ
ಬರಿದೆ ಬಾರಿಸದಿರು ತಂಬೂರಿ ||ತರವಲ್ಲ ತಗಿ||

ಮದ್ದಾಲಿ ದನಿಯೊಳು ತಂಬೂರಿ ಆದ
ತಿದ್ದಿ ನುಡಿಸಾಬೇಕು ತಂಬೂರಿ
ಸಿದ್ದ ಸಾಧಕರ ವಿದ್ಯೆಗೆ ಒದಗುವ
ಬುದ್ಧಿವಂತಕೆ ತಕ್ಕ ತಂಬೂರಿ ||ತರವಲ್ಲ ತಗಿ||

ಬಾಳ ಬಲ್ಲವರಿಗೆ ತಂಬೂರಿ ದೇವಾ
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ತಿಳಿಯದ
ತಾಳಗೇಡಿಗೆ ಸಲ್ಲ ತಂಬೂರಿ ||ತರವಲ್ಲ ತಗಿ||

ಸತ್ಯ ಶರಧಿಯೊಳು ತಂಬೂರಿ
ನಿತ್ಯ ಉತ್ತಮರಾಡುವ ತಂಬೂರಿ
ಬತ್ತೀಸರಾಗದ ಬಗೆಯನರಿಯದಂಥ
ಕತ್ತಿಗಿನ್ಯಾತಕ ತಂಬೂರಿ ||ತರವಲ್ಲ ತಗಿ||

ಹಸನಾದ ಮೆಳಕ್ಕೆ ತಂಬೂರಿ ಇದು
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳದೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ ||ತರವಲ್ಲ ತಗಿ||
← ಜಾನಪದ ಗೀತೆ ಶಿಶುನಾಳ ಷರೀಫ್ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.