← ಶ್ರೀಶಿವ

ಅಗ್ನಿಗೆ ತಂಪುಂಟೆ?

📂 ಶ್ರೀಶಿವ
✍️ ಅಲ್ಲಮ ಪ್ರಭು
🏷️ ವಚನಗಳು
ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ ?
ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ ?
ದಾಳಿಕಾರಂಗೆ ಧರ್ಮವುಂಟೆ ?
[ಕನ್ನಗಳ್ಳಂಗೆ] ಕರುಳುಂಟೆ ?
ಗುಹೇಶ್ವರಾ, ನಿಮ್ಮ ಶರಣರು,
ಮೂರು ಲೋಕವರಿಯೆ ನಿಶ್ಚಟರಯ್ಯಾ.
← ಶ್ರೀಶಿವ ಅಲ್ಲಮ ಪ್ರಭು ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.